ನ್ಯಾಯಾಧೀಶರ ಮನೆಯಲ್ಲಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳು ಮಹಾರಾಷ್ಟ್ರದ) ಲಾತೂರು ರೈಲ್ವೆ ಸ್ಟೇಷನ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಏ.3 ರಂದು ಬೀದರ್ ನಗರದ ಜನವಾಡ ರಸ್ತೆಯಲ್ಲಿರುವ 2ನೇ ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಡಿ.ಶೇಜ್ ಚೌಟಾಯಿ ವಸತಿ ಗೃಹದಲ್ಲಿ ಕಳ್ಳತನವಾಗಿತ್ತು. ಮಹಾರಾಷ್ಟ್ರದಿಂದ ರೈಲಿನಲ್ಲಿ ಬೀದರ್‌ಗೆ ಬಂದಿದ್ದ ಕಳ್ಳರು, ಮೂರು ದಿನ ಬೀದರ್‌ನಲ್ಲಿ ಉಳಿದು ಕಳ್ಳತನದ ಸ್ಕೆಚ್ ಹಾಕಿದ್ದರು