ನಗರದ ಭಸವ ಭವನದಲ್ಲಿ ಇಂದು ನಡೆದ ಗದ್ದಿಗೇರಿ ಕ್ಷೇತ್ರದ ನಂದಿಪುರ ಮಠದ ಗುರು ಚರಂತಪ್ಪಜ್ಜ ಶ್ರೀಗಳ 21 ನೇ ಸ್ಮರಣೋತ್ಸವದ ಅಂಗವಾಗಿ ನಗರದಲ್ಲಿ ಶ್ರೀಗಳ ಭಾವಚಿತ್ರದ ಶೋಭಾಯಾತ್ರೆ ಶ್ರದ್ದೆ ಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಸ್ವತಃ ನಂದಿಪುರ ಮಠದ ಡಾ. ಮಹೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಕ್ತರೊಂದಿಗೆ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.